ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಸುಂಕದಕಟ್ಟೆ ಯಕ್ಷಗಾನ ತಿರುಗಾಟಕ್ಕೆಚಾಲನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 20 , 2014
ನವ೦ಬರ್ 20, 2014

ಸುಂಕದಕಟ್ಟೆ ಯಕ್ಷಗಾನ ತಿರುಗಾಟಕ್ಕೆಚಾಲನೆ

ಬಜಪೆ : ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದಿಂದ ಪ್ರವರ್ತಿತ ಶ್ರೀ ಅಂಬಿಕಾ ಅನ್ನಪೂರ್ಣೆಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 40ನೇ ವರ್ಷದ ತಿರುಗಾಟಕ್ಕೆ ಬುಧವಾರ ಗೆಜ್ಜೆ ಮೂಹೂರ್ತದೊಂದಿಗೆ ಸಾಂಪ್ರದಾಯಿಕ ಚಾಲನೆ ನೀಡಲಾಯಿತು.

ಬೆಳಗ್ಗೆ ದೇವಳದಲ್ಲಿ ಗಣಹೋಮ ನಡೆದು ಮೇಳದ ಸೇವೆಯಾಟದ ಪೂರ್ವಬಾವಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು. ಕುಡುಪು ಕೃಷ್ಣ ರಾಜ ತಂತ್ರಿ ಅವರ ನೇತತ್ವದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ಜರುಗಿತು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ವೇದಮೂರ್ತಿ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಮೇಳದ ಹಿಮ್ಮೇಳ ಮುಮ್ಮೇಳದ ಕಲಾವಿದರುಗಳಿಗೆ ಶುಭ ಹಾರೈಸಿದರು. ಮೇಳದ ಮ್ಯಾನೇಜರ್ ಜಗದೀಶ್, ಶಿವಣ್ಣ ಶೆಟ್ಟಿ ವಾಮಂಜೂರು, ಜಿಪಂ ಸದಸ್ಯೆ ಯಶವಂತಿ ಆಳ್ವ, ವಕೀಲರಾದ ವಿನೋಧರ ಪೂಜಾರಿ, ಗಣೇಶ ಪೆರ್ಲಗುರಿ, ಬಾಬು ಎನ್.ಶೆಟ್ಟಿ, ಸುಕುಮಾರ್ ಸಾಲ್ಯಾನ್, ಪ್ರಸಂಗಕರ್ತ ಶ್ರೀನಿವಾಸ್ ಸಾಲ್ಯಾನ್ ಉಪಸ್ಥಿತರಿದ್ದರು. ರಂಗ ಸ್ಥಳದಲ್ಲಿ ದೇವರ ಪೂಜೆ ನಡೆದ ಬಳಿಕ 'ಪಾಂಡವಾಶ್ವಮೇಧ' ಯಕ್ಷಗಾನ ಜರುಗಿತು.ಮುಂದಿನ 180 ದಿನಗಳ ಕಾಲ ಮೇಳವು, ನಾಡಿನೆಲ್ಲೆಡೆ ಯಕ್ಷಗಾನ ಪ್ರದರ್ಶನ ನೀಡಲಿದೆ.

ಕೃಪೆ : http://www.vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
akarsh j shetty(6/17/2015)
uttama mela.hosa hosa prayogagalannu alavadisi kondide.udaharane kalamiti[sandharbika]pradarshana;pauranika,samajika,itihasika mattu kalpanika prasangagala pradarshana ityadi.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ